ಜಮ ಉಗ್ರಾಣ

ಮಾಹಿತಿ ಮಾರ್ಗದರ್ಶಿ

ಈ ಪವಿತ್ರ ಸ್ಥಳದ ಬಗ್ಗೆ

ಜಮಾ ಉಗ್ರಾಣ'ವು ಅನ್ನಪೂರ್ಣ ಪಾಕಶಾಲೆಗೆ ಬೇಕಾಗುವ ಆಹಾರ ಧಾನ್ಯಗಳ ಮುಖ್ಯ ಉಗ್ರಾಣವಾಗಿದೆ (ದಾಸ್ತಾನು ಕೊಠಡಿ). ಆಹಾರ ಸಂರಕ್ಷಣೆಯ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳ ಮೂಲಕ, ಈ ಜಮಾ ಉಗ್ರಾಣದಲ್ಲಿ ಆಹಾರ ಪದಾರ್ಥಗಳನ್ನು ತಿಂಗಳುಗಟ್ಟಲೆ ಕೆಡದಂತೆ ಸಂಗ್ರಹಿಸಿಡಬಹುದಾಗಿದೆ. ಜಮಾ ಉಗ್ರಾಣದ ವಿಶಿಷ್ಟ ವಾಸ್ತುಶಿಲ್ಪವು ಇಡೀ ವ್ಯವಸ್ಥೆಯ ಪ್ರಮುಖ ವಿಸ್ಮಯಗಳಲ್ಲೊಂದಾಗಿದ್ದು, ಅದರ ಭವ್ಯತೆ ಹಾಗೂ ವಿಶಾಲತೆಯನ್ನು ಅರಿಯಲು ಒಮ್ಮೆ ಭೇಟಿ ನೀಡಲೇಬೇಕು. ದವಸ-ಧಾನ್ಯಗಳು, ತರಕಾರಿಗಳು, ಸಂಬಾರ ಪದಾರ್ಥಗಳು, ತೆಂಗಿನಕಾಯಿಗಳು ಹಾಗೂ ಕ್ಷೇತ್ರದ ತೋಟಗಳಲ್ಲಿಯೇ ಬೆಳೆದ ಪ್ರಮುಖ ಪದಾರ್ಥಗಳನ್ನು ಅತ್ಯಂತ ಸ್ವಚ್ಛವಾಗಿ ಹಾಗೂ ಸುಲಭವಾಗಿ ಬಳಕೆಗೆ ಸಿಗುವಂತೆ ಇಲ್ಲಿ ಸಂಗ್ರಹಿಸಿಡಲಾಗುತ್ತದೆ