ಶ್ರೀ ಚಂದ್ರನಾಥ ಸ್ವಾಮಿ ಬಸದಿ

ಮಾಹಿತಿ ಮಾರ್ಗದರ್ಶಿ

ಈ ಪವಿತ್ರ ಸ್ಥಳದ ಬಗ್ಗೆ

ವಿವಿಧ ಧರ್ಮಗಳ ಸಂಗಮವು ಧರ್ಮದ ನೆಲೆವೀಡಾದ ಧರ್ಮಸ್ಥಳವನ್ನು ದೀರ್ಘಕಾಲದಿಂದ ಬೇರೂರಿರುವ ಒಂದು ವಿಶಿಷ್ಟ ಪರಂಪರೆಯ ತಾಣವನ್ನಾಗಿಸಿದೆ. ಧರ್ಮಸ್ಥಳದಲ್ಲಿರುವ ಶತಮಾನಗಳಷ್ಟು ಹಳೆಯದಾದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯನ್ನು ಅತ್ಯಂತ ಸುಸ್ಥಿತಿಯಲ್ಲಿ ಸಂರಕ್ಷಿಸಿಡಲಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಪವಿತ್ರ ಹಾಗೂ ಪ್ರಮುಖ ದಿಗಂಬರ ಧರ್ಮದ ದೇವಾಲಯಗಳಲ್ಲಿ ಒಂದಾಗಿದೆ.
ಶ್ರೀ ವೀರೇಂದ್ರ ಹೆಗ್ಗಡೆಯವರು 2001ರ ಮೇ ತಿಂಗಳಲ್ಲಿ ಕೈಗೊಂಡ ಜೀರ್ಣೋದ್ಧಾರ ಕಾರ್ಯವು ಶ್ರೀ ಚಂದ್ರನಾಥ ಸ್ವಾಮಿ ಬಸದಿಯನ್ನು ಧರ್ಮಸ್ಥಳ ಹಾಗೂ ದಕ್ಷಿಣ ಭಾರತದ ಅತ್ಯಂತ ಸುಂದರವಾದ ಕಟ್ಟಡಗಳಲ್ಲಿ ಒಂದನ್ನಾಗಿ ರೂಪಿಸಿದೆ.